ಯಶಸ್ವಿ ನೂರು ಸಂಚಿಕೆಗಳನ್ನು ಪೂರೈಸಿದ ಕನ್ನಡದ ಜನಪ್ರಿಯ ಧಾರಾವಾಹಿ

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ನೂರು ಸಂಚಿಕೆಗಳನ್ನು ಪೂರೈಸಿದ ಹಿನ್ನೆಲೆ ವಿಶೇಷವಾದ ಸನ್ನಿವೇಶವನ್ನು ದಟ್ಟವಾದ ಅರಣ್ಯದ ನಡುವೆ ಆಕರ್ಷಕವಾಗಿ ಹರಿಯುವ ಕಾವೇರಿ ನದಿ ಪ್ರೇಕ್ಷಣೀಯ ಸ್ಥಳವಾದ ಪ್ರಕೃತಿಯ ಸೊಬಗಾಗಿರುವ ಮೇಕೆದಾಟುವಿನಲ್ಲಿ ಚಿತ್ರೀಕರಣ ಮಾಡಿ ಸಂಭ್ರಮಿಸುತ್ತಿದೆ ಧಾರಾವಾಹಿ ತಂಡ. ಹೌದು ಇತ್ತೀಚೆಗೆ ಕೆಲವು ವರ್ಷಗಳಿಂದೀಚೆಗೆ ಕನ್ನಡ ಕಿರುತೆರೆಗೆ ಭಾರಿ ಹೊಡೆತ ಅಂದರೆ ಅದು ಪರಭಾಷೆ ಧಾರಾವಾಹಿಗಳು ಕನ್ನಡ ಭಾಷೆಗೆ ಡಬ್ ಆಗಿ ಕನ್ನಡದ ಬಹುತೇಕ ವಾಹಿನಿಗಳಲ್ಲಿ ಸಾಲು ಸಾಲು ಪರಭಾಷೆ ಧಾರಾವಾಹಿಗಳು ಪ್ರಸಾರವಾಗ ತೊಡಗಿದವು. ಇದರ ಪರಿಣಾಮ ಕನ್ನಡದ ಅನೇಕ ಧಾರಾವಾಹಿಗಳಿಗೆ ಭಾರಿ ಹೊಡೆತ ಬಿದ್ದಂದಾಯಿತು.

ಕನ್ನಡದ ಧಾರಾವಾಹಿಗಳಿಗೆ ನೀಡಬೇಕಾದ ಸ್ಥಳಾವಕಾಶವನ್ನು ಬೇರೆ ಭಾಷೆಯಿಂದ ಕನ್ನಡಕ್ಕೆ ಡಬ್ ಆಗಿರುವ ಧಾರಾವಾಹಿಗಳಿಗೆ ಮಣೆ ಹಾಕಲಾಯಿತು. ಹಾಗಾಗಿ ಬಹುತೇಕರು ಇನ್ಮುಂದೆ ಕನ್ನಡ ಕಿರುತೆರೆ ವಾಹಿನಿಗಳಲ್ಲಿ ಕನ್ನಡ ಧಾರಾವಾಹಿಗಳಿಗೆ ಉಳಿಗಾಲವಿಲ್ಲ ಎಂದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಇದೀಗ ಇವರೆಲ್ಲರ ಅಭಿಪ್ರಾಯ ಸಂಪೂರ್ಣವಾಗಿ ಉಲ್ಟಾ ಹೊಡೆದಿದೆ ಎನ್ನಬಹುದು. ಹೌದು ಏಕೆಂದರೆ ಕನ್ನಡದ ಧಾರಾವಾಹಿಗಳು ಯಾವ ಪರಭಾಷೆ ಧಾರಾವಾಹಿಗಳಿಗೂ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ತಯಾರಾಗುತ್ತಿವೆ. ಸಿನಿಮಾದ ಲೆವೆಲ್ಗೆ ತಕ್ಕಂತಹ ಮೇಕಿಂಗ, ಕಾಸ್ಟ್ಯೂಮ್, ವೈಭವೋಪೇತ ಮನೆಗಳು , ದೃಶ್ಯ ಸನ್ನಿವೇಶಗಳನ್ನು ಸ್ಥಳೀಯವಾಗಿ ಮಾತ್ರ ಅಲ್ಲದೆ ಹೊರ ದೇಶದಲ್ಲಿಯೂ ಕೂಡ ಅದ್ದೂರಿಯಾಗಿಯೇ ಸೆರೆಯಿಡಿಯಲಾಗುತ್ತಿದೆ.

ಉತ್ತಮ ಕಥೆ, ಕಥೆಗೆ ತಕ್ಕಂತೆ ಪಾತ್ರಗಳ ಪೋಷಣೆ, ಅನುಭವಿ ಕಲಾವಿದರು, ಅತ್ಯಾಧುನಿಕ ತಂತ್ರಜ್ಞಾನ ಹೀಗೆ ಎಲ್ಲದರಲ್ಲಿಯೂ ಕೂಡ ಅಪ್ಡೇಟ್ ಆಗಿದ್ದಾರೆ ಕನ್ನಡ ಧಾರಾವಾಹಿ ತಯಾರಕರು. ಅಂತೆಯೇ ಕನ್ನಡ ಕಿರುತೆರೆಯ ಪ್ರಸಿದ್ದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷಣ ಧಾರಾವಾಹಿ ಕೂಡ ಅಚ್ಚು ಕಟ್ಟಾಗಿ ಮೂಡಿ ಬರುತ್ತಿದೆ. ಕಿರುತೆರೆಯ ಸ್ಟಾರ್ ನಟ ಜಗನ್ ಮತ್ತು ವಿಜಯಲಕ್ಷ್ಮಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಈ ಲಕ್ಷಣ ಧಾರಾವಾಹಿ ಕೂಡ ಇದೀಗ 115 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಸಂಭ್ರಮದಲ್ಲಿದೆ. ನಟಿ ವಿಜಯ ಲಕ್ಷ್ಮಿ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ಈ ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರಾ ಪಾತ್ರವನ್ನು ಬಹಳ ಸೊಗಸಾಗಿ ನಿರ್ವಹಿಸುತ್ತಿದ್ದಾರೆ.

ವಿಶೇಷ ಅಂದರೆ ಜಗನ್ ಅವರೇ ಈ ಲಕ್ಷಣ ಧಾರಾವಾಹಿಗೆ ಬಂಡವಾಳ ಹೂಡಿ ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಈ ಲಕ್ಷಣ ಧಾರಾವಾಹಿಯ ಕಥಾ ವಸ್ತುವೇ ಪ್ರಾಧಾನ್ಯತೆಯನ್ನೊಂದಿದೆ. ಹೌದು ಸಮಾಜದಲ್ಲಿರುವ ವರ್ಣ ಭೇದದ ಕುರಿತು ಹೇಳುವ ಲಕ್ಷಣ ಧಾರಾವಾಹಿ ಇಂದಿಗೂ ಕೂಡ ಆಧುನಿಕ ಸಮಾಜದಲ್ಲಿ ಕಪ್ಪು ಬಣ್ಣ ಹೊಂದಿರುವ ಹುಡುಗಿಯರಿಗೆ ಸಮಾಜದಲ್ಲಿ ಯಾವ ರೀತಿಯ ಶೋಷಣೆಗಳು ಆಗುತ್ತವೆ ಎಂಬುದನ್ನ ನಿರ್ದೇಶಕ ಶಿವರಾಮ್ ಮಾಗಡಿ ಅವರು ಸೂಕ್ಷ್ಮವಾಗಿ ತೋರಿಸುತ್ತಿದ್ದಾರೆ. ಇನ್ನು ಈ ಲಕ್ಷಣ ಧಾರಾವಾಹಿಯಲ್ಲಿ ಕನ್ನಡದ ಖ್ಯಾತ ನಟಿ ಸುಧಾ ಬೆಳವಾಡಿ ಸೇರಿದಂತೆ ದೀಪಾ ಅಯ್ಯರ್, ಅಗ್ನಿ ಸಾಕ್ಷಿ ಸೀರಿಯಲ್ ಖ್ಯಾತಿಯ ಸುಕೃತಾ, ರಶ್ಮಿ ಸೇರಿದಂತೆ ಬಹುದೊಡ್ಡ ತಾರಾಗಣವೇ ಇದೆ.

%d bloggers like this: