ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಕನ್ನಡತಿ ಧಾರಾವಾಹಿ ಎಲ್ಲರಿಗೂ ಅಚ್ಚುಮೆಚ್ಚು. ಧಾರಾವಾಹಿಯ ಆರಂಭದಿಂದ ಇಂದಿನವರೆಗೂ ತನ್ನ ಕುತೂಹಲವನ್ನು ಉಳಿಸಿಕೊಂಡು ಬರುವಲ್ಲಿ ಕನ್ನಡತಿ ಧಾರಾವಾಹಿ ಯಶಸ್ಸು ಕಂಡಿದೆ. ಅಲ್ಲದೆ ಕನ್ನಡತನ ಮಾಯವಾಗುತ್ತಿರುವ ಈ ಕಾಲದಲ್ಲಿ ಕನ್ನಡದ ಪ್ರಾಮುಖ್ಯತೆಗೆ ಹೆಚ್ಚಾಗಿ ಪ್ರಾಶಸ್ತ್ಯ ನೀಡಿರುವ ಧಾರವಾಹಿ ವಯಸ್ಕರಿಂದ ಹಿಡಿದು ಸಣ್ಣ ವಯಸ್ಸಿನವರೆಗೂ ಎಲ್ಲರಿಗೂ ಇಷ್ಟವಾಗಿದೆ. ಹರ್ಷ ಮತ್ತು ಭುವಿ ಜೋಡಿಯಂತೂ ಎಲ್ಲರಿಗೂ ಅಚ್ಚು ಮೆಚ್ಚು. ಈ ಜೋಡಿಯನ್ನು ಹೆಚ್ಚಾಗಿ ಪರದೆಯ ಮೇಲೆ ನೋಡಲು ಎಲ್ಲರೂ ಇಷ್ಟ ಪಡುತ್ತಾರೆ. ಇನ್ನು ಕನ್ನಡತಿ ಧಾರಾವಾಹಿ ಶುರುವಾಗಿ ಎರಡು ವರ್ಷಗಳನ್ನು ಪೂರೈಸಿದೆ. ಆರಂಭದ ದಿನದಿಂದ ಇಂದಿನವರೆಗೂ ಟಿಆರ್ಪಿ ವಿಷಯದಲ್ಲಿ ಕನ್ನಡತಿ ಧಾರಾವಾಹಿ ಮೊದಲ ಸ್ಥಾನದಲ್ಲಿದೆ.

ವೀಕ್ಷಕರು ಭುವಿ ಮತ್ತು ಹರ್ಷ ಅವರನ್ನು ಪರದೆಯ ಮೇಲೆ ಒಟ್ಟಿಗೆ ನೋಡಲು ಬಯಸುತ್ತಿದ್ದರು. ಈಗ ಅವರ ಒತ್ತಾಯದ ಮೇರೆಗೆ ಫೆಬ್ರವರಿ 6ರಂದು ಸಂಜೆ 2ಗಂಟೆಗಳ ಕಾಲ ಇವರ ಪ್ರೀತಿಯ ಪಯಣವನ್ನು ತೋರಿಸಲಾಯಿತು. ಇನ್ನು ಈ 2ಗಂಟೆಗಳ ಎಪಿಸೋಡ್ಗೆ ‘ಹವಿ’ ಎಂದು ಹೆಸರಿಡಲಾಗಿತ್ತು. ಹರ್ಷನಿಗಾಗಿ ಭುವಿ ಸರ್ಪ್ರೈಸ್ ಒಂದನ್ನು ಪ್ಲಾನ್ ಮಾಡುತ್ತಾಳೆ. ಹಾಗೆಯೇ ಹರ್ಷನಿಗೆ ಸರ್ಪ್ರೈಸ್ ಕೊಟ್ಟ ಭುವಿ, ಮಂಡಿಯೂರಿ ಪ್ರಪೋಸ್ ಕೂಡ ಮಾಡುತ್ತಾಳೆ. ನಾವಿಬ್ಬರೂ ಒಟ್ಟಿಗೆ ಅಜ್ಜ ಅಜ್ಜಿಯಾಗಬೇಕು. ಮುಂದೊಂದು ದಿನ ನಾವಿಬ್ಬರೂ ಕೈಹಿಡಿದುಕೊಂಡು ಒಟ್ಟಿಗೆ ಇಲ್ಲಿ ಬಂದು ಇದೇ ರೀತಿ ಜೋರಾಗಿ ಹೆಸರು ಕೂಗಬೇಕು. ಹಾಗೆಯೇ ಒಟ್ಟಿಗೆ ಕೊನೆಯುಸಿರೆಳೆಯಬೇಕು ಎಂದು ಇಬ್ಬರು ತುಂಬಾ ಎಮೋಷನಲ್ ಆಗಿ ಮಾತನಾಡಿದ್ದಾರೆ. ಈ ಎಪಿಸೋಡ್ ನ್ನು ಅವರ ಅಭಿಮಾನಿಗಳೆಲ್ಲ ಇಷ್ಟ ಪಟ್ಟಿದ್ದಾರೆ.



ಇದರ ಬಗ್ಗೆ ಪ್ರತಿಕ್ರಿಯಿಸಿದ ಭುವಿ, ಕನ್ನಡತಿ ಧಾರಾವಾಹಿ ನನ್ನ ಮನಸ್ಸಿಗೆ ತುಂಬಾ ಹತ್ತಿರವಾಗಿರುವ ಪ್ರಾಜೆಕ್ಟ್. ಇದು ನನಗೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಕೊಡುತ್ತಿದೆ. ಇದು ನನ್ನ ದಿನನಿತ್ಯದ ಜೀವನದ ಒಂದು ಭಾಗವಾಗಿದೆ. ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಭುವಿಯಾಗಿ ವೀಕ್ಷಕರ ಹೃದಯದಲ್ಲಿ ಅತಿ ದೊಡ್ಡ ಸ್ಥಾನ ಕೊಟ್ಟಿರುವುದಕ್ಕಾಗಿ ಧನ್ಯವಾದಗಳು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಗಳಲ್ಲಿ ಹರ್ಷ ಮತ್ತು ಭುವಿ ಪ್ರೀತಿಯಲ್ಲಿ ಕೊರತೆ ಕಾಣಿಸುತ್ತಿದೆ ಎಂದು ತುಂಬಾ ಮೆಸೇಜ್ ಬರುತ್ತಿದ್ದವು. ಹೀಗಾಗಿ ನಮ್ಮ ವೀಕ್ಷಕರಿಗೆ 2ಗಂಟೆಗಳ ರೋಮ್ಯಾಂಟಿಕ್ ಸಂಚಿಕೆಯನ್ನು ನೀಡಿದ್ದೇವೆ ಎಂದು ಭುವಿ ಪಾತ್ರದಾರಿ ರಂಜಿನಿ ರಾಘವನ್ ಹೇಳಿದರು.



ನನ್ನ ಆನ್ ಸ್ಕ್ರೀನ್ ಕ್ಯಾರೆಕ್ಟರ್ ಅನ್ನು ಎಲ್ಲರೂ ಇಷ್ಟಪಡುತ್ತಿದ್ದಾರೆ. ಎಲ್ಲ ವಯಸ್ಸಿನವರು ಭೇದವಿಲ್ಲದೆ ಪ್ರೀತಿ ತೋರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದು ಟೈಮ್ಸ್ ಸಂದರ್ಶನದಲ್ಲಿ ಹರ್ಷ ಪಾತ್ರಧಾರಿ ಕಿರಣ್ ರಾಜ್ ಹೇಳಿದ್ದಾರೆ. ಹವಿಯ ಸ್ಪೆಷಲ್ ಎಪಿಸೋಡ್ಗೆ ನಾವು ಹಾಗೂ ನಮ್ಮ ಟೀಮ್ ತುಂಬಾ ಬೆಸ್ಟ್ ಶ್ರಮ ನೀಡಿದ್ದೇವೆ. ನಾವು ನಮ್ಮ ಕೆಲಸಕ್ಕೆ, ನಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ಕೊಡುತ್ತಿದ್ದೇವೆ. ವೀಕ್ಷಕರು ಕೂಡ ಅದೇರೀತಿ ಈ ಜೋಡಿಯನ್ನು ಒಪ್ಪಿಕೊಂಡಿದ್ದಾರೆ. ಪ್ರತಿಯೊಬ್ಬರು ಧಾರಾವಾಹಿಯ ಘಟನೆಗಳಿಗೆ ಮತ್ತು ಪಾತ್ರಕ್ಕೆ ತಮ್ಮ ಜೀವನವನ್ನು ರಿಲೇಟ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹರ್ಷ ಮತ್ತು ಭುವಿ ಹೇಳಿದರು.