ನಿನ್ನೆ ರಾತ್ರಿಯ ವೇಳೆ ರಾಜ್ಯದ ಮುಖ್ಯಮಂತ್ರಿ ಯೆಡಿಯೂರಪ್ಪನವರಿಗೆ ಕೊರೊನ ಪಾಸಿಟಿವ್ ಇದೆ ಎಂದು ವರದಿ ಬಂದಮೇಲೆ ಅವರ ಸಂಪರ್ಕದಲ್ಲಿದ್ದ ಎಲ್ಲರಿಗು ಕ್ವಾರಂಟೈನ್ ಅಲ್ಲಿ ಇರಲು ಸೂಚಿಸಲಾಯಿತು, ಮುಖ್ಯ ಮಂತ್ರಿ ಅವರಿಗಷ್ಟೇ ಅಲ್ಲದೆ ಅವರ ಮಗಳಿಗೂ ಕೂಡಾ ಕೊರೊನ ಪಾಸಿಟಿವ್ ಬಂದಿದ್ದು ಇಬ್ಬರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಅಧಿಕಾರಿಗಳು ಯೆಡಿಯೂರಪ್ಪನವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರ ಮೂಲಗಳನ್ನು ಹುಡುಕುತ್ತಿದ್ದಾರೆ. ಈನಡುವೆ ಯೆಡಿಯೂರಪ್ಪನವರಿಗೆ ಕೊರೊನ ಪಾಸಿಟಿವ್ ಇರುವುದಾಗಿ ತಿಳಿದುಬಂದಿದ್ದರಿಂದ ಕನ್ನಡ ಚಿತ್ರರಂಗಕ್ಕೆ ದೊಡ್ಡ ಅನಾಹುತ ತಪ್ಪಿದೆ. ಯೆಡಿಯೂರಪ್ಪನವರಿಗೆ ಕೊರೊನ ಬಂದ್ರೆ ಚಿತ್ರರಂಗಕ್ಕೆ ಹೇಗೆ ಅನಾಹುತ ಎಂದು ಕೇಳುತ್ತಿದ್ದೀರಾ? ನೋಡಿರಿ ಇಲ್ಲಿ.
ಲಾಕ್ ಡೌನ್ ಇಂದ ಥಿಯೇಟರ್ ಗಳು ಮುಚ್ಚಿದ್ದು ಥಿಯೇಟರ್ ಮಾಲೀಕರಿಗೆ ಹಾಗು ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ನಷ್ಟ ಆಗಿದೆ, ಈ ಕುರಿತು ಕನ್ನಡ ಚಿತ್ರರಂಗದ ಹಿರಿಯ ನಟರು ರವಿಚಂದ್ರನ್, ಶಿವರಾಜಕುಮಾರ್, ಯಶ್, ಪುನೀತ್ ರಾಜಕುಮಾರ್ ಅವರೆಲ್ಲಾ ಸೇರಿ ಸಚಿವ ಸಿಟಿ ರವಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು. ಇಂದು ಕೂಡಾ ಕನ್ನಡ ಚಿತ್ರರಂಗದವರೆಲ್ಲಾ ಸೇರಿ ಮುಖ್ಯ ಮಂತ್ರಿ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು, ಒಂದು ವೇಳೆ ಮುಖ್ಯ ಮಂತ್ರಿ ಅವರ ರಿಪೋರ್ಟ್ ಒಂದು ದಿನ ತಡವಾಗಿದ್ದರು ದೊಡ್ಡ ಅನಾಹುತವೇ ನಡೆಯುತ್ತಿತ್ತು ಹಾಗು ಅಂದುಕೊಂಡಂತೆ ಕನ್ನಡ ಚಿತ್ರರಂಗ ಯೆಡಿಯೂಅಪ್ಪ ಅವರನ್ನು ಭೇಟಿ ಮಾಡಿ ಚಿತ್ರಮಂದಿರಗಳನ್ನು ತೆಗೆಯಲು ಮನವಿ ಮಾಡುತ್ತಿತ್ತು. ಗಣ್ಯರು ಭೇಟಿಯಾದಾಗ ಕೈಕುಲುಕುವುದು ಸಾಮಾನ್ಯ ಹೀಗಾಗಿ ಕನ್ನಡ ಚಿತ್ರರಂಗಕ್ಕೂ ಹರಡುವ ಸಾಧ್ಯತೆ ಇತ್ತು.