ಯೋಗರಾಜ್ ಭಟ್ಟರ ಹೊಸ ಚಿತ್ರದಿಂದ ರಚಿತಾ ರಾಮ್ ಅವರು ಹೊರಕ್ಕೆ, ಬದಲಿಗೆ ಬೇರೆ ನಟಿಯ ಆಗಮನ

ಗುಳಿ ಕೆನ್ನೆಯ ಚೆಲುವೆ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ಸ್ಯಾಂಡಲ್ವುಡ್ ನ ಬೇಡಿಕೆಯ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯಕ್ಕೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ತಮ್ಮ ಆಕ್ಟಿಂಗ್ ಮೂಲಕ ಎಲ್ಲರ ಮನಗೆದ್ದ ರಚಿತಾ, ಕಲರ್ಸ್ ಕನ್ನಡ ವಾಹಿನಿಯ ಕಾಮಿಡಿ ಶೋನ ಜುಡ್ಜ್ ಆಗಿಯೂ ಕೂಡ ಸಕ್ಸಸ್ ಆದವರು. ಪ್ರತಿ ಬಾರಿ ಯಾವುದಾದರೊಂದು ವಿಷಯಕ್ಕೆ ಟ್ರೊಲ್ ಆಗುವ ಈ ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಒಪ್ಪಿಕೊಂಡಿದ್ದ ಸಿನಿಮಾ ಒಂದರಿಂದ ಹೊರನಡೆದು ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ಯಶಸ್ ಸೂರ್ಯ ಅವರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ಈಗ ರಚಿತಾರಾಮ್ ಈ ಸಿನಿಮಾದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಕಾಲ್ ಶೀಟ್ ಸಮಸ್ಯೆಯಿಂದಾಗಿ ರಚಿತಾ ರಾಮ್ ಅವರು ಗರಡಿ ಸಿನಿಮಾದಿಂದ ಹೊರನಡೆದಿದ್ದಾರೆ. ಗರಡಿ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ಆಗಿದ್ದು, ಸಚಿವರಾದಂತ ಬಿಸಿ ಪಾಟೀಲ್ ಅವರೂ ಕೂಡ ಹಲವು ವರ್ಷಗಳ ನಂತರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನಿರಂಜನ್ ಬಾಬು ಅವರು ಛಾಯಾಗ್ರಹಣ ನೀಡಿದ್ದು, ಕೌರವ ವೆಂಕಟೇಶ್, ವಿನೋದ್ ಈ ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ. ಇನ್ನು ಈ ಸಿನಿಮಾದಿಂದ ರಚಿತಾರಾಮ್ ಹೊರ ನಡೆದಿರುವುದರಿಂದ ಗರಡಿ ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಅವರ ಬದಲಾಗಿ ಸೋನಾಲ್ ಮಾಂಟೇರಿಯೋ ನಟಿಸಲಿದ್ದಾರೆ.

ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಲಿರುವ ಈ ಚಿತ್ರದಿಂದ, ಸೋನಾಲ್ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಇದು ಎರಡನೇ ಚಿತ್ರವಾಗಿದೆ. ಈ ಮೊದಲು ಪಂಚತಂತ್ರ ಸಿನಿಮಾದಲ್ಲಿ ಇಬ್ಬರು ಜೊತೆಗೆ ಕೆಲಸ ಮಾಡಿದ್ದರು. ಇನ್ನು ನಟಿ ಸೋನಾಲ್ ಕೂಡ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್ ಗಳನ್ನು ಹೊಂದಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದ ಸೋನಾಲ್, ಜಯತೀರ್ಥ ನಿರ್ದೇಶನದ ಬನಾರಸ್ ಸೀನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಶಂಭೋ ಶಿವಶಂಕರ, ಶುಗರ್ ಫ್ಯಾಕ್ಟರಿ, ಭಗವಾನ್ ಶ್ರೀಕೃಷ್ಣ, ಪರಮಾತ್ಮ ಹಾಗೂ ಬುದ್ಧಿವಂತ2 ಸಿನಿಮಾಗಳಲ್ಲಿ ಸೋನಾಲ್ ಅವರು ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಗರಡಿ ಸಿನಿಮಾ ಕೂಡ ಸೇರಿದೆ.

%d bloggers like this: