ಯುವಕರ ನಿದ್ದೆಗೆಡಿಸಿದೆ ಟಿವಿಎಸ್ ಕಂಪನಿಯ ಈ ಸ್ಕೂಟರ್, ಭಾರಿ ಪೈಪೋಟಿ ಹಾಗೂ ಮಾರಾಟ

ದ್ವಿಚಕ್ರ ವಾಹನಗಳ ಪೈಪೋಟಿಯಲ್ಲಿ ಮುಂಚೂಣೆಯಲ್ಲಿರುವ ಟಿವಿಎಸ್ ಎನ್ಟೋರ್ಕ್ 125! ಹೌದು ಇಂದು ದೇಶಾದ್ಯಂತ ಜನರಿಗಿಂತ ವಾಹನಗಳೇ ಹೆಚ್ಚು ಎಂದು ವರದಿಯಾಗಿವೆ. ಅದರಲ್ಲೂ ಕಾರು, ಬಸ್ಸುಗಳಿಗಿಂತ ಈ ದ್ವಿಚಕ್ರ ವಾಹನಗಳ ಸಂಖ್ಯೆ ನಗರ ಪ್ರದೇಶಗಳಲ್ಲಿ ರಸ್ತೆಗಳನ್ನೆಲ್ಲಾ ಆವರಿಸಿಕೊಂಡು ಬಿಟ್ಟಿದೆ ಎನ್ನಬಹುದು. ಆಟೋಮೊಬೈಲ್ ಕ್ಷೇತ್ರದ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರಿ ಪೈಪೋಟಿ ಏರ್ಪಟ್ಟಿದ್ದು, ಸದ್ಯದ ಮಟ್ಟಿಗೆ ಹೋಂಡಾ, ಸುಜುಕಿ, ಟಿವಿಎಸ್ ಕಂಪನಿಗಳು ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿ ಸಂಸ್ಥೆಗಳಾಗಿವೆ. ದಶಕಗಳ ಕಾಲ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ನಿರಂತರವಾಗಿ ಪಾರುಪತ್ಯ ಸಾಧಿಸುತ್ತಿತ್ತು. ಸುಜುಕಿ ಆಕ್ಸೇಸ್ 125 ಸ್ಕೂಟರ್ ಗಳು ತಕ್ಕ ಮಟ್ಟಿಗೆ ಸ್ಪರ್ಧೆಯೊಡ್ಡುತಿತ್ತು, ಆದರೆ ಕಳೆದ ವರ್ಷ ಹೊಸದಾಗಿ ಬಿಡುಗಡೆಯಾದ ಟಿವಿಎಸ್ ಎನ್ಟೋರ್ಕ್ ಸ್ಕೂಟರ್ ಇವೆರಡೂ ಕಂಪನಿಗಳಿಗೆ ಭಾರಿ ಪೈಪೋಟಿ ನೀಡಿದೆ.

ಹೌದು ಟಿವಿಎಸ್ ಕಂಪನಿಯು ವಿಶಿಷ್ಟ ವಿನ್ಯಾಸ ರೂಪದೊಂದಿಗೆ ಬಿಡುಗಡೆ ಮಾಡಿದ ಟಿವಿಎಸ್ ಎನ್ಟೋರ್ಕ್125 ಸ್ಕೂಟರ್ ಸದ್ಯದ ಮಟ್ಟಿಗೆ ಯುವ ಪೀಳಿಗೆಯವರಿಗೆ ಭಾರಿ ಅಚ್ಚು ಮೆಚ್ಚಾಗಿದೆ. ಅದರಲ್ಲಿಯೂ ಈ ಹುಡುಗಿಯರಿಗೆ ಈ ಸ್ಕೂಟರ್ ನಲ್ಲಿ ಲಾಂಗ್ ಡ್ರೈವ್ ಹೋಗಬೇಕೆಂಬ ಹುಚ್ಚಿಡಿಸಿದೆ ಈ ಟಿವಿಎಸ್ ಎನ್ಟೋರ್ಕ್ ಸ್ಕೂಟರ್. ಹಾಗದರೆ ಇಷ್ಟೊಂದು ಜನಪ್ರಿಯತೆ ಪಡೆದಿರುವ ಈ ಸ್ಕೂಟರ್ ನಲ್ಲಿ ಇರುವ ಫೀಚರ್ ಏನು ಎಂಬುದನ್ನು ತಿಳಿಯುವುದಾದರ, ಟಿವಿಎಸ್ ರೇಸ್ ಅಡಿಷನ್ ಸ್ಕೂಟರ್ 125 ಸಿಸಿ ಹೊಂದಿದ್ದು, ಆಕರ್ಷಕ ವಿನ್ಯಾಸ ಪಡೆದಿದೆ. ನೋಡುಗರನ್ನು ಒಮ್ಮೆಲೆ ಸೆಳೆಯವಂತಹ ವಿಶಿಷ್ಟವಾದ ಲೈಟ್ಸ್, ಡಿಸ್ಕ್ ಬ್ರೇಕ್ ಡಿಜಿಟಲ್ ಮೀಟರ್ ಪರಿಕರಗಳನ್ನು ಒಳಗೊಂಡಿದೆ.

ಹೌದು ಈ ಟಿವಿಎಸ್ ಎನ್ಟೋರ್ಕ್ 125 ಸ್ಕೂಟರ್ ನಲ್ಲಿ ಮುಂಭಾಗದಲ್ಲಿ ಮರ್ಸಿಡೀಸ್, ಬೆಂಝ಼್ ಕಾರಿನಂತೆ ಎಲ್.ಇ.ಡಿ ಲೈಟ್ಸ್ ಒಳಗೊಂಡಿದೆ. ಇಂಡಿಕೇಟರ್ ನಾರ್ಮಲ್ ಹಾಲೋಜಿನ್ ಲೈಟ್, ಫ್ರಂಟ್ ನಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಫೀಚರ್ ಹೊಂದಿದೆ. ಇದರ ಜೊತೆಗೆ ಯಾವ ವಾಹನಗಹಲ್ಲಿಯೂ ಇಲ್ಲದ ಬ್ಲೂಟೂತ್, ಫೋನ್ ಕನೆಕ್ಟಿವಿಟಿ, ನ್ಯಾವಿಗೇಷನ್ ಸೌಲಭ್ಯ ಒಳಗೊಂಡಿದೆ. ಇನ್ನು ಇದರಲ್ಲಿ ವಿಶಾಲವಾದ ಬೂಟ್ಸ್ ಸ್ಪೈಸ್ ಇದ್ದು, ಮೊಬೈಲ್ ಚಾರ್ಜಿಂಗ್ ಕೂಡ ಮಾಡಬಹುದಾಗಿದೆ. ಇನ್ನು ಈ ಸ್ಕೂಟರ್ ಬಿಸ್ 4 ವಿನೂತನ ಆವೃತ್ತಿಒಳಗೊಂಡಿದ್ದು, 9ಬಿಎಚ್ ಪಿ ಪವರ್ ಮತ್ತು 10.50 ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಒಂದೇ ಸಿಲೆಂಡರ್, ಫೋರ್ ಸ್ಟ್ರೋಕ್ ಮತ್ತು ಥ್ರೀ ವೋಲ್ಟ್ಸ್ ಟಿವಿಎಸ್ ನಿಂದ ನಿಯಂತ್ರಿಸುತ್ತದೆ. ಈ ಸ್ಕೂಟರ್ 105 ಕಿಮೀ ವೇಗ ಹೊಂದಿದ್ದು, ಗಂಟೆಗೆ ಕನಿಷ್ಟ 60 ಕಿಮೀ ಕ್ರಮಿಸಬಹುದಾಗಿದೆ. ಜೊತೆಗೆ ಇದು ಐದು ಲೀಟರ್ ಪೆಟ್ರೋಲ್ ಸಂಗ್ರಹ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಟ್ಯಾಂಕ್ ಮುಚ್ಚುಳ ಹಿಂಭಾಗದ ಮೇಲೆಯೇ ಇದ್ದು, ಪೆಟ್ರೋಲ್ ಹಾಕಿಸುವಾಗ ಡಿಕ್ಕಿ ತೆಗೆಯುವ ಅವಶ್ಯಕತೆ ಇರುವುದಿಲ್ಲ. ಈ ಸ್ಕೂಟರ್ ನ ಮೈಲೇಜ್ ಪ್ರತಿ ಲೀಟರ್ಗೆ 35 ರಿಂದ 40 ಕಿಮೀ ಕ್ರಮಿಸಬಹುದಾಗಿದೆ. ಸದ್ಯದ ಇದರ ಎಕ್ಸ್ ಶೋ ರೂಂ ಆರಂಭಿಕ ಬೆಲೆಯ 64,322ರೂ ಆಗಿದ್ದು, ಕೆಂಪು, ನೀಲಿ, ಹಳದಿ ಬಣ್ಣದ ಟಿವಿಎಸ್ ಎನ್ಟೋರ್ಕ್ ಸ್ಕೂಟರ್ ಗಳು ಭಾರಿ ಬೇಡಿಕೆಯಲ್ಲಿವೆ. ಅದರಲ್ಲಿಯೂ ಕೆಂಪು ಬಣ್ಣದ ಟಿವಿಎಸ್ ಎನ್ಟೋರ್ಕ್ ಸ್ಕೂಟರ್ ಹೆಚ್ಚು ಜನಪ್ರಿಯವಾಗಿದೆ.

%d bloggers like this: