ಕನ್ನಡ ಕಿರುತೆರೆಯಲ್ಲಿ ಅಗ್ನಿಪರೀಕ್ಷೆ ಶುರು, ಅರೇ ಇದೇನಿದು ಕನ್ನಡ ಕಿರುತೆರೆಯಲ್ಲಿ ಅಗ್ನಿ ಪರೀಕ್ಷೆ ಶುರು ಅಂತಿದ್ದಾರಲ್ಲ ಅಂತೀರಾ. ಅಂದರೆ ಕನ್ನಡ ಕಿರುತೆರೆ ವಾಹಿನಿಯಲ್ಲಿ ಇತ್ತೀಚೆಗೆ ಪರಭಾಷಾ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಿವೆ. ಇದು ನಿಜಕ್ಕೂ ಕೂಡ ಮೂಲ ಕನ್ನಡ ಧಾರಾವಾಹಿಗಳಿಗೆ ಅಗ್ನಿ ಪರೀಕ್ಷೆ ಅಂದರು ಕೂಡ ಸರಿಯೇ. ಆದರೆ ಇದೀಗ ಬರುತ್ತಿರುವುದು ತೆಲುಗು ಮೂಲ ಭಾಷೆಯ ಅಗ್ನಿ ಪರೀಕ್ಷೆ ಎಂಬ ಸೀರಿಯಲ್ ಕನ್ನಡ ಭಾಷೆಗೆ ಡಬ್ ಆಗಿ ಇದೇ ಕಳೆದ ಜನವರಿ 31 ರಿಂದ ಕನ್ನಡದ ಜನಪ್ರಿಯ ವಾಹಿನಿ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

ಈಗಾಗಲೇ ಕನ್ನಡ ಕಿರುತೆರೆ ವಾಹಿನಿಯಲ್ಲಿ ಮೂಲ ಹಿಂದಿ, ಮರಾಠಿ ಭಾಷೆಯ ಅನೇಕ ಧಾರಾವಾಹಿಗಳು ಕನ್ನಡಕ್ಕೆ ರಿಮೇಕ್ ಆಗಿ ಯಶಸ್ವಿಯಾಗಿ ಮುನ್ನುಗುತ್ತಾ ಸಾಗುತ್ತಿವೆ. ಅದಕ್ಕೆ ಉತ್ತಮ ಉದಾಹರಣೆಗಳು ಅಂದರೆ ಜೊತೆ ಒಜೊತೆಯಲಿ, ಹಿಟ್ಲರ್ ಕಲ್ಯಾಣ ಧಾರಾವಾಹಿಗಳು. ಇದೀಗ ಹೊಸ ವಿಚಾರ ಏನಪ್ಪಾ ಅಂದರೆ ಇದೇ ಜೀ಼ ಕನ್ನಡ ವಾಹಿನಿಯಲ್ಲಿ ತೆಲುಗು ಮೂಲ ಭಾಷೆಯ ಅಗ್ನಿ ಪರೀಕ್ಷೆ ಎಂಬ ಧಾರಾವಾಹಿ ಕನ್ನಡ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿದೆ. ಪ್ರಸಾರವಾದ ಒಂದೇ ದಿನದಲ್ಲಿ ಈ ಅಗ್ನಿ ಪರೀಕ್ಷೆ ಸೀರಿಯಲ್ ಕನ್ನಡ ಕಿರುತೆರೆ ವೀಕ್ಷಕರನ್ನ ಮೋಡಿ ಮಾಡಿದೆ.



ಈ ಅಗ್ನಿ ಪರೀಕ್ಷೆ ಧಾರಾವಾಹಿಯಲ್ಲಿ ಪ್ರೀತಿ ಮತ್ತು ಪ್ರತೀಕಾರ ದ್ವೇಷ ಸೇಡು ತೀರಿಸಿಕೊಳ್ಳುವ ಸಂಘರ್ಷದ ಭಾವನೆಗಳನ್ನು ಒಳಗೊಂಡಿರುವ ಕಥಾ ಹಂದರವನ್ನು ಕಾಣಬಹುದಾಗಿದೆಯಂತೆ. ಈ ಅಗ್ನಿ ಪರೀಕ್ಷೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕನ್ನಡದ ನಟ ಆಕರ್ಷ್ ಬೈರಮುಡಿ ಕೂಡ ನಟಿಸಿದ್ದಾರೆ. ನಟ ಆಕರ್ಷ್ ಬೈರಮುಡಿ ಅವರು ಕನ್ನಡದಲ್ಲಿ ಸೀತಾ ವಲ್ಲಭ ಧಾರಾವಾಹಿಯಲ್ಲಿ ಅಭಿನಯಿಸಿದ್ದರು. ಇದರ ಜೊತೆಗೆ ಈ ಅಗ್ನಿ ಸಾಕ್ಷಿ ಧಾರಾವಾಹಿಯ ಮುಖ್ಯ ಪಾತ್ರಗಳಲ್ಲಿ ನಟಿ ತುನುಜಾ ಪುಟ್ಟ ಸ್ವಾಮಿ, ಮಹಿ ಗೌತಮಿ, ನವೀನ್ ವೆಟ್ರಿ ಸೇರಿದಂತೆ ಅನೇಕ ಅನುಭವಿ ಹಿರಿಯ ಕಲಾವಿದರು ಬಣ್ಣ ಹಚ್ಚಿದ್ದಾರೆ.



ಇನ್ನು ಹೊಸ ಈ ಅಗ್ನಿ ಸಾಕ್ಷಿ ಧಾರಾವಾಹಿಯು ಪ್ರತಿ ದಿನ ಮಧ್ಯಾಹ್ನ 1.30 ಕ್ಕೆ ಜೀ಼ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಒಟ್ಟಾರೆಯಾಗಿ ಕನ್ನಡದ ಧಾರಾವಾಹಿಗಳು ಪರಭಾಷೆಗೆ ರಿಮೇಕ್ ಮತ್ತು ಡಬ್ ಆಗುತ್ತಿರುವ ನಡುವೆ ಪರಭಾಷೆಯ ಧಾರಾವಾಹಿಗಳು ಕೂಡ ಕನ್ನಡಕ್ಕೆ ಡಬ್ ಆಗಿ ಬರುತ್ತಿರುವುದು ಕಿರುತೆರೆ ಕ್ಷೇತ್ರದಲ್ಲಿ ಆರೋಗ್ಯಕರ ಬೆಳವಣಿಗೆ ಆರಂಭವಾಗಿದೆ ಎನ್ನಬಹುದು. ಇನ್ನು ಈ ಪರಭಾಷಾ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಬರುತ್ತಿರುವುದು ಕನ್ನಡ ಕಿರುತೆರೆ ಮತ್ತು ಹಿರಿ ತೆರೆ ಎರಡೂ ಕಡೆಯ ಕಲಾವಿದರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.